Call us :  080-23513711   
ಕನ್ನಡ   English
Demo2 first Demo2 first Demo2 first Demo2 first Demo2 first Demo2 first Demo2 first Demo2 first

 ಮುಖಪುಟ

ರಾಜ್ಯದಲ್ಲಿ ಸುಮಾರು 31,563 ಕೆರೆಗಳಿದ್ದು, ವಿವಿಧ ಕಾರಣಗಳಿಂದ ಈ ಕೆರೆಗಳು ವಿನಾಶದ ಅಂಚಿನಲ್ಲಿದ್ದು, ತೀವ್ರ ನೀರಿನ ಕೊರತೆ ಮತ್ತು ಅಂತರ್ಜಲವು ಬರಿದಾಗುವುದಕ್ಕೆ ಎಡೆಮಾಡಿಕೊಟ್ಟಿರುವುದರಿಂದಾಗಿ ಜಲೀಯ ಸಸ್ಯ ಸಂಪತ್ತಿಗೆ ಮತ್ತು ಪ್ರಾಣಿ ಸಂಪತ್ತಿಗೆ ಬಾಧಕ ಉಂಟುಮಾಡುವುದಲ್ಲದೆ, ನೀರಾವರಿಗೆ, ಕುಡಿಯುವುದಕ್ಕೆ ನೀರು ಮತ್ತು ಜಾನುವಾರುಗಳ ಬಳಕೆಗೆ ನೀರಿನ ಲಭ್ಯತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಈ ಜಲಮೂಲಗಳ ರಕ್ಷಣೆ, ಸಂರಕ್ಷಣೆ ಮತ್ತು ಪುನಶ್ಚೇತನಗೊಳಿಸುವ ಉದ್ದೇಶವನ್ನು ಸಾಧಿಸುವುದಕ್ಕಾಗಿ ಅಗತ್ಯವಾದ ಅಧಿಕಾರಗಳನ್ನು ಮತ್ತು ಪ್ರಕಾರ್ಯಗಳನ್ನು ಹೊಂದಿರುವ, ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಲು 2014 ರಲ್ಲಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2014 ನ್ನು ಕರ್ನಾಟಕ ರಾಜ್ಯ ವಿಧಾನಮಂಡಲ ಜಾರಿಗೊಳಿಸಿದೆ. ಎಲ್ಲಾ ಪೌರನಿಗಮಗಳ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಿಂದ ಹೊರಗೆ ಇರುವ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ದಿಗಾಗಿ 2014 ರಲ್ಲಿ ಪ್ರಾಧಿಕಾರವನ್ನು ಸ್ಥಾಪಿಸಲಾಗಿದ್ದು, ಸದರಿ ಅಧಿನಿಯಮವನ್ನು 2018 ರಲ್ಲಿ ತಿದ್ದುಪಡಿಗೊಳಿಸಿ ಎಲ್ಲಾ ಪೌರನಿಗಮಗಳ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಕೆರೆಗಳನ್ನು ಕೂಡಾ ಕೆರೆ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡಿಸಲಾಗಿದೆ.
ಮಾನ್ಯ ಮುಖ್ಯ ಮಂತ್ರಿಗಳು ಪ್ರಾಧಿಕಾರದ ಅಧ್ಯಕ್ಷರಾಗಿದ್ದು ಹಾಗೂ ಮಾನ್ಯ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಮಂಡಳಿಗಳ ಆಯುಕ್ತರರು, ಸಣ್ಣ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರರು ಮುಂತಾದವರು ಪ್ರಾಧಿಕಾರದ ಆಡಳಿತ ಮಂಡಳಿಯ ಸದಸ್ಯರಾಗಿರುತ್ತಾರೆ.
ಕೆರೆ ಪ್ರಾಧಿಕಾರವು ನವೆಂಬರ್ 2017 ರಿಂದ ಕಾರ್ಯಾರಂಭಗೊಂಡಿದೆ.
ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕೆರೆಗಳ ಮತ್ತು ಸರೋವರಗಳ ಸಂರಕ್ಷಣೆ, ಪುನಃಶ್ಚೇತನ, ಅಂತರ್ಜಲ ಅಭಿವೃದ್ಧಿ, ಪರಿಸರ ನಿರ್ವಹಣೆ, ಆದ್ರ್ರ ಪ್ರದೇಶಗಳ ಅಭಿವೃದ್ಧಿ, ನೀರು ನಿರ್ವಹಣೆ, ಕೃಷಿ ಮತ್ತು ತೋಟಗಾರಿಕೆ ಅಭಿವೃದ್ಧಿ, ಕೃಷಿ ಆಧಾರಿತ ಉದ್ಯಮಗಳ ಅಭಿವೃದ್ಧಿ ಮುಂತಾದ ಯೋಜನೆಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಅನುಷ್ಟಾನಗೊಳಿಸುವುದು ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಜವಾಬ್ದಾರಿಯಾಗಿದೆ.


ktcda.com © 2020 Karnataka Tank Conservation and Development Authority. All Rights Reserved.